ಭಾರತೀಯ ರೂಪಾಯಿ ಡಾಲರ್ ವಿರುದ್ಧ ಮತ್ತೊಮ್ಮೆ ದಾಖಲೆ ಮಟ್ಟಕ್ಕೆ ಕುಸಿದು, ಗುರುವಾರ ಬೆಳಗಿನ ವಹಿವಾಟಿನಲ್ಲಿ ₹90.43 ತಲುಪಿದೆ. ಬುಧವಾರವೂ ರೂಪಾಯಿ 90 ಮಟ್ಟದ ಗಡಿ ದಾಟಿ ₹90.29 ಇನ್‌ಟ್ರಾ ಡೇ ಲೋ ದಾಖಲಿಸಿತ್ತು.
ಇದು ರೂಪಾಯಿಯ ನಿರಂತರ ದುರ್ಬಲತೆಯ ಹೊಸ ಹಂತವಾಗಿದ್ದು, ರೂಪಾಯಿ–ಡಾಲರ್ ನಡುವಿನ ವೇಗವಾದ ₹5 ಕುಸಿತ ಎಂದು SBI ಸಂಶೋಧನಾ ತಂಡ ಹೇಳಿದೆ. RBI ಹಸ್ತಕ್ಷೇಪ ಮಾಡಿದರೂ, ಜಾಗತಿಕ ಒತ್ತಡ ರೂಪಾಯಿಯನ್ನು ಕೆಳಕ್ಕೆ ತಳ್ಳುತ್ತಿದೆ.
ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳು
- ಅಮೇರಿಕಾದ 50% “ವಿರುದ್ದ ಆಮದು ತೆರಿಗೆಗಳು” → ಭಾರತ ಮಾರುಕಟ್ಟೆಗೆ ನೇರ ಹೊಡೆತ
- ವಿದೇಶಿ ಹೂಡಿಕೆದಾರರ ಹಿಂತೆಗೆತ (FPI) → ಈ ವರ್ಷ $17 ಬಿಲಿಯನ್ ಹಿಂತೆಗೆದುಕೊಂಡಿದ್ದಾರೆ
- ಕ್ರೂಡ್ ಆಯಿಲ್, ಚಿನ್ನ–ಬೆಳ್ಳಿ ಬೆಲೆ ಏರಿಕೆ → ಆಮದು ವೆಚ್ಚ ಭಾರೀ ಏರಿಕೆ
ಪರಿಣಾಮ ಏನು?
- ಆಮದು ಸರಕುಗಳ ಬೆಲೆ ಏರಿಕೆ
- ಪ್ರವಾಸ ಮತ್ತು ವಿದೇಶಿ ಶಿಕ್ಷಣ ಖರ್ಚು ಹೆಚ್ಚಳ
- ದೇಶೀಯ ಮಾರುಕಟ್ಟೆಯಲ್ಲಿ ಅಸ್ಥಿರತೆ
ನಿಯಂತ್ರಿಸಲು, RBI ಮಾರುಕಟ್ಟೆಗೆ ಹಸ್ತಕ್ಷೇಪ ಮಾಡುವ ಸಂಭವವಿದೆ. ಆದರೆ ಜಾಗತಿಕ ಒತ್ತಡ ಮುಂದುವರಿದರೆ ರೂಪಾಯಿ ಸ್ಥಿರಗೊಳ್ಳಲು ಸಮಯ ಹಿಡಿಯಬಹುದು.